Tel: 7676775624 | Mail: info@yellowandred.in

Language: EN KAN

    Follow us :


ಪುರಾಣ ಪ್ರಸಿದ್ಧ ಸಂಜೀವರಾಯ ಜಾತ್ರೆ ಆರಂಭ

Posted Date: 12 Jul, 2019

ಪುರಾಣ ಪ್ರಸಿದ್ಧ ಸಂಜೀವರಾಯ ಜಾತ್ರೆ ಆರಂಭ

ಚನ್ನಪಟ್ಟಣ: ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿರುವ ಶ್ರೀ ಸಂಜೀವರಾಯ ದೇವರ ಜಾತ್ರೆಯು ಇದೇ ತಿಂಗಳ ೧೧ ರಿಂದ ಪ್ರಾರಂಭವಾದರೂ ಸಹ ೧೩ ರ ಶನಿವಾರ ಬ್ರಹ್ಮ ರಥೋತ್ಸವ ನೆರವೇರಲಿದ್ದು ಜಾತ್ರೆಯು ಅದ್ದೂರಿಯಾಗಿ ನೆರವೇರಲಿದೆ.


ಒಟ್ಟು ಐದು ದಿನಗಳ ಕಾಲ ನಡೆಯುವ ಸಂಜೀವರಾಯ ಸ್ವಾಮಿಯ ಜಾತ್ರೆಯು ೧೧ ರ ಗುರುವಾರ ಅಭಿಷೇಕ, ಮಹಾ ಮಂಗಳಾರತಿ ಯೊಂದಿಗೆ ಆರಂಭವಾಗಿ, ೧೨ ರ ಶುಕ್ರವಾರ ಸಂಗೀತ ಕಾರ್ಯಕ್ರಮವನ್ನು ಏಪ್೯ಡಿಸಲಾಗಿದೆ.


೧೩ ರ ಶನಿವಾರ ರಥೋತ್ಸವದ ಜೊತೆಗೆ ತಿರುಪ್ಪಾವಡೆ ಸೇವೆ, ಅನ್ನರಾಶಿ ಪೂಜೆ, ಗೋವು, ಅಶ್ವ, ಗಜಪೂಜೆಯೊಂದಿಗೆ *ಬ್ರಹ್ಮ ರಥೋತ್ಸವ* ನೆರವೇರಲಿದೆ.

ಇದೇ ದಿನ *ಬೇಲೂರು ಹಳೇಬೀಡು* *ಸೊಬಗಿನ* ಶಿಲ್ಪ ಕಲಾ* *ಸುವರ್ಣ ಮಂಟಪದ* *ಮಧ್ಯೆ* *ವೈಕುಂಠ ಸೇವಾದರ್ಶನ* * ಮತ್ತು ದಿವ್ಯವಾದ*  *ತೋಮಾಲ ಸೇವೆ* ನಡೆಯಲಿದ್ದು ಭಕ್ತರು ಭಕ್ತಿಭಾವದಿಂದ ಮಿಂದೇಳುವ ಸಮಯ ಇದಾಗಿದೆ.


*ದೇವದಾಸಿ ನಾಟಕ*


೧೪ ರ ಭಾನುವಾರ ಪೂಜಾ ಕೈಂಕರ್ಯಗಳ ಜೊತೆಗೆ ಸಂಜೆ *ದೇವರ ಹೊಸಹಳ್ಳಿ* *ಗ್ರಾಮದ ಅಂಬರೀಶ್* ರವರ ನಿರ್ದೇಶನದಲ್ಲಿ *ದೇವದಾಸಿ* ಎಂಬ ಸಾಮಾಜಿಕ ನಾಟಕವನ್ನು ಶ್ರೀ ಸಂಜೀವರಾಯ ಸ್ವಾಮಿ ಸಾಂಸ್ಕೃತಿಕ ಕಲಾ ಟ್ರಸ್ಟ್ ನವರು ಪ್ರದರ್ಶಿಸಲಿದ್ದಾರೆ.

ಈ ನಾಟಕ ಪ್ರದರ್ಶನ ದ ವೇಳೆ ತಾಲ್ಲೂಕಿನ ಅನೇಕ ಗಣ್ಯರು ಮತ್ತು ದೇವಾಲಯದ ಅರ್ಚಕರು ಪಾಲ್ಗೊಳ್ಳಲಿದ್ದಾರೆ ಎಂದು ನಾಟಕ ನಿರ್ದೇಶಕ ಅಂಬರೀಶ್ ಮತ್ತು ಅರ್ಚಕ ಶರತ್ ರವರು ತಿಳಿಸಿದರು.


೧೫ ರ ಸೋಮವಾರ *ನಾದಸ್ವರ, ಸ್ಯಾಕ್ಸಾಪೋನ್* ಕಾರ್ಯಕ್ರಮದೊಂದಿಗೆ ಜಾತ್ರೆಯು ಮುಕ್ತಾಯವಾಗಲಿದ್ದು ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ದೇವರ ದರ್ಶನ ಮಾಡಲು ಕಲಾ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.


ಸಂಜೀವರಾಯ ಸ್ವಾಮಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವುದರಿಂದ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಸೂಕ್ತ ಬಂದೋಬಸ್ತ್ ಗಾಗಿ ಪೋಲಿಸರನ್ನು ನಿಯೋಜಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑