Tel: 7676775624 | Mail: info@yellowandred.in

Language: EN KAN

    Follow us :


ಲೋಕಾಯುಕ್ತ ಭೇಟಿ ವೈಯಕ್ತಿಕ ದೂರುಗಳೇ ಅಧಿಕ

Posted Date: 17 Jul, 2019

ಲೋಕಾಯುಕ್ತ ಭೇಟಿ ವೈಯಕ್ತಿಕ ದೂರುಗಳೇ ಅಧಿಕ

ಚನ್ನಪಟ್ಟಣ: ತಾಲ್ಲೂಕು ಕಛೇರಿಗೆ ಇಂದು ಭೇಟಿ ನೀಡಿದ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ಸಾರ್ವಜನಿಕ ಹಿತಾಸಕ್ತಿ ಉಳ್ಳ ದೂರುಗಳಿಗೆ ಬದಲಾಗಿ ವೈಯುಕ್ತಿಕ ಲಾಭದ ಹಾಗೂ ಸ್ಪಂದಿಸದ ಅಧಿಕಾರಿಗಳ ವಿರುದ್ಧದ ದೂರುಗಳು ಹೆಚ್ಚಾಗಿ ಬಂದಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸಿ ನ್ಯಾಯ ಒದಗಿಸುವುದಾಗಿ‌ ಲೋಕಾಯುಕ್ತ ಅಧಿಕಾರಿ ಅಂಜಲಿ ತಿಳಿಸಿದರು.


ಲೋಕಾಯುಕ್ತ ಅಧಿಕಾರಿಗಳು ಇಂದು ನಗರಕ್ಕೆ ಆಗಮಿಸುವ ಸುದ್ದಿಯು ಪತ್ರಿಕೆಗಳಲ್ಲಿ ಮಾತ್ರ ಬಂದಿದ್ದು ಎಲ್ಲಾ ಸಾರ್ವಜನಿಕರಿಗೆ ತಲುಪದ ಕಾರಣ ಬೆರಳಣಿಕೆಯ ದೂರುದಾರರು ಭಾಗವಹಿಸಿ ದೂರು ನೀಡಿದರು.


ದಲಿತ ಮುಖಂಡ ವೆಂಕಟಾಚಲಯ್ಯ ಕೊಲ್ಲಾಪುರದಮ್ಮ ದೇವಾಲಯದ ಆಸ್ತಿ ಸರ್ಕಾರದ ಆಸ್ತಿಯಾಗಿದ್ದು ಟ್ರಸ್ಟ್ ನವರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ದೂರು ನೀಡಿದರೇ ವಕೀಲ ಸುರೇಶ್ ಶೆಟ್ಟಿಹಳ್ಳಿ ಕೆರೆ ಒತ್ತುವರಿಯ ಬಗ್ಗೆ ಸಾರ್ವಜನಿಕ ದೂರು ದಾಖಲಿಸಿದರು.

ಅನೇಕ ದೂರುದಾರರು ತಮ್ಮ ವೈಯುಕ್ತಿಕ ಲಾಭ, ಕುಟುಂಬದ ಆಸ್ತಿ, ಕಂದಾಯ ಇಲಾಖೆ, ಪೋಡಿ,  ಹಾಗೂ ಅಧಿಕಾರಿಗಳು ಸ್ಪಂದಿಸದ ಕಾರಣಕ್ಕಾಗಿ ದೂರು ನೀಡಿದರು.


ಶೆಟ್ಟಿಹಳ್ಳಿ ಕೆರೆಗೆ ಸಂಬಂಧಿಸಿದ ದೂರನ್ನು ಕುತೂಹಲದಿಂದ ಆಲಿಸಿದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಮಾಹಿತಿ ಕೇಳಲಾಗಿ ಹಲವಾರು ಕಾರಣ ನೀಡಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಂಡರು.


ಸಭೆಯ ನಂತರ ಶೆಟ್ಟಿಹಳ್ಳಿ ಕೆರೆಯನ್ನು ವೀಕ್ಷಿಸಿದ ಅಧಿಕಾರಿಗಳು ಕೆರೆ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇಷ್ಟು ಒತ್ತುವರಿಯಾಗಿದ್ದರು ಸಹ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಮತ್ತು ಈ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ಅನುದಾನ ಬಿಡುಗಡೆ ಮಾಡಿರುವ ಇಲಾಖೆಯ ವಿರುದ್ಧ ಅಸಮಾಧನಗೊಂಡಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.


ತಹಶಿಲ್ದಾರ್ ಜಯಣ್ಣ, ಶಿರಸ್ತೇದಾರ ಮಹದೇವಯ್ಯ, ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ತೋಟಗಾರಿಕೆ, ರೇಷ್ಮೆ ಇಲಾಖೆ, ನಗರಸಭೆ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑