Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕು ಪಂಚಾಯತಿಯಲ್ಲಿ ನೀರಸ ಸಭೆ

Posted Date: 30 Jul, 2019

ತಾಲ್ಲೂಕು ಪಂಚಾಯತಿಯಲ್ಲಿ ನೀರಸ ಸಭೆ

ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇಂದು ಸ್ಥಾಯಿ ಸಮಿತಿಯ ಮೂರು ಸಭೆಗಳು ನಡೆದಿದ್ದು ಎಲ್ಲಾ ಸಭೆಯೂ ಬಸಭೆಗಲಕು ವಾಗಿ ಜರುಗಿದವು, ಬೆರಳೆಣಿಕೆ ಸದಸ್ಯರು ಮತ್ತು ಡಜನ್ ಅಧಿಕಾರಿಗಳನ್ನು ಬಿಟ್ಟರೆ ಮಿಕ್ಕವರು ಇತ್ತ ತಲೆ ಹಾಕಲೇ ಇಲ್ಲ, ಇನ್ನೂ ಸ್ಥಾಯಿ ಸಮಿತಿಯ ಅಷ್ಟೂ ಸದಸ್ಯರು ಮತ್ತು ಎಲ್ಲಾ ಅಧಿಕಾರಿಗಳು ಬರದಿದ್ದರಿಂದ ನೆಪ ಮಾತ್ರಕ್ಕೆ ಸಭೆ ನಡೆದಿದ್ದು ಸದಸ್ಯರು ಮತ್ತು ಅಧಿಕಾರಿಗಳ ಬೇಜಾವಾಬ್ದಾರಿಯನ್ನು ಅಣಕಿಸುತಿತ್ತು.


ಒಂದೂವರೆ ಗಂಟೆ ಗಳ ಕಾಲ ತಡವಾಗಿ ಪ್ರಾರಂಭ ವಾದ ಮೊದಲ ಹಣಕಾಸು ಹಾಗೂ ಲೆಕ್ಕ ಪರೀಶೋಧನ ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಸಭೆಯು ನಡೆಯಿತು. ಅದರ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಹರೂರು ರಾಜಣ್ಣ ವಹಿಸಿದ್ದರು.

ಇಂದು ಬೆಳಿಗ್ಗೆ ೧೦:೩೦ಕ್ಕೆ ಒಂದು ಸಭೆ ೧೨:೦೦ಕ್ಕೆ ಮತ್ತೊಂದು ಸಭೆ ೦೨:೩೦ ಕ್ಕೆ ಮೂರನೆಯ ಸಭೆ ಯೆಂದು ಮೂರು ಸಭೆ ಗಳನ್ನು ನಿಗದಿ ಪಡಿಸಲಾ ಗಿತ್ತು. ಮೊದಲನೆ ಸಭೆ ೧೨ ಕ್ಕೆ ಪ್ರಾರಂಭವಾಯಿತು.

ಸ್ಥಾಯಿ ಸಮಿತಿಯ ಅಧ್ಯಕ್ಷರಿಲ್ಲದೆ ಹಣಕಾಸು ಲೆಕ್ಕ ಪರಿಶೋಧನೆ ಸಭೆ ಆರಂಭ ವಾಯಿತು. ಡಜನ್ ಗಟ್ಟಲೇ  ಅಧಿಕಾರಿಗಳು ಇದ್ದರು, ಆದರೆ ತಾ ಪಂ ಸದಸ್ಯರು  ಐದು ಜನ ಮಾತ್ರ ಹಾಜರಿದುದ್ದರಿಂದ  ಸಭೆಯು ಒಂದು ರೀತಿ ಯಲ್ಲಿ ಪೇಲವವಾಗಿ ಅನಾವರಣ ಆಯಿತು.


ಸಭೆಯಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಅನುದಾನ ಗಳ ಕಾಮಗಾರಿಗಳಲ್ಲಿ ಅಕ್ರಮ, ನಮ್ಮ ಗಮನಕ್ಕೆ ಬರುತಿಲ್ಲ, ಯಾವ ಇಲಾ ಖೆಯ ಕಾಮಗಾರಿಗೆ  ಹಣ ಬಿಡುಗಡೆ ಆಗುತ್ತೋ ಆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿ ಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರಾಜಣ್ಣ ಅವರು ಹೇಳಿದರು.

ಸಂದರ್ಭದಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯ ಬಗ್ಗೆ ಪ್ರಸ್ತಾಪ ಮಾಡಿ ಬಹುಶಃ ನಿಮ್ಮ  ಪತ್ರಿಕೆಯಲ್ಲಿ ವಸ್ತುನಿಷ್ಠ ವರದಿ ಬಂದುದರಿಂದಲೇ ಒಬ್ಬ ಇಂಜಿನಿಯರ್ ಅಮಾನತು ಆಗಿದ್ದಾರೆ, ನಿಮ್ಮ ನೈಜ ವರದಿಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ವರದಿಗಾರ ಗೋ.ರಾ ಶ್ರೀನಿವಾಸ ಹೆಸರನ್ನು ಉಲ್ಲೇಖಿಸಿ ತಾ ಪಂ ಅಧ್ಯಕ್ಷ ಮತ್ತು ಇಒ ರಾಮಕೃಷ್ಣಯ್ಯ ಮಾತನಾಡಿದರು.


ಹಣಕಾಸು ಅನುಮೋದನೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಕಛೇರಿಯ ವೆಚ್ಚ ಮೂರು ಲಕ್ಷ ಸೇರಿ ಒಟ್ಟು ನಾಲ್ಕು ಲಕ್ಷಕ್ಕೆ ಅನುಮೋದನೆ.

ಶಿಶು ಅಭಿವೃದ್ಧಿ ಇಲಾ ಖೆಗೆ ಕೇಂದ್ರ ಪುರಸ್ಕೃತ ಆಡಳಿತ ವೆಚ್ಚ, ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ, ಅಂಗನ ವಾಡಿ ಕಟ್ಟಡ ನಿರ್ಮಾಣ, ಮತ್ತು ಶಿಶು ಪಾಲನ ಕೇಂದ್ರಗಳ ಆಡಳಿತ ವೆಚ್ಚ ಸೇರಿ ಎರಡು ಕೋಟಿ ಮೂವತ್ತು ಲಕ್ಷ ರೂಪಾ ಯಿಗೆ ಅನುಮೋದನೆ ನೀಡಲಾಯಿತು.


*ಎರಡನೇ ಸಭೆ ಆರಂಭ*


ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಅವರ ಅಧ್ಯಕ್ಷತೆಯಲ್ಲಿ ಎರಡನೆಯ ಸಾಮಾನ್ಯ ಸ್ಥಾಯಿ ಸಮಿತಿ ತನ್ನ ಕಾರ್ಯಕಲಾಪವನ್ನು ನಡೆಸಿತು. 

ತಾಲ್ಲೂಕು ಪಂಚಾ ಯಿತಿ ವ್ಯಾಪ್ತಿಗೆ ಬರುವ ಬಹುತೇಕ ಎಲ್ಲಾ ಇಲಾಖೆ ಗಳಲ್ಲೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ, ಇದರಿಂದ ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ. 

ಹಲವಾರು ಇಲಾಖೆ ಗಳಿಗೆ ಸ್ವಂತ ಕಟ್ಟಡ ಇಲ್ಲ, ಕೆಲವು ಸ್ವಂತ ಕಟ್ಟಡ ಗಳು ಇದ್ದು ಶಿಥಿಲವಾಗಿವೆ, ಇನ್ನು ಕೆಲವು ನಿರೀಕ್ಷಿತ ರೀತಿಯಲ್ಲಿ ಇಲ್ಲ. ಈ ಸಂಬಂಧ ಪ್ರತಿಕ್ರಿಯಿಸಿದ ಇಒ ಅವರು, ಇದರ ವರದಿ ಸರ್ಕಾರಕ್ಕೆ ಕಳುಹಿಸಲಾಗುವುದು  ಎಂದು ಸಭೆಯ ಗಮನಕ್ಕೆ ತಂದರು.


*ಮೂರನೇ ಸಭೆ*


ಸಾಮಾನ್ಯ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸಹ ನಿರೀಕ್ಷಿತ ಮಟ್ಟ ತಲುಪಲಿಲ್ಲ, ಕೇವಲ ಸಣ್ಣ ಚರ್ಚೆಗೆ ಮೀಸಲಾಗಿತ್ತು, ಇದೇ ಚರ್ಚೆಯಲ್ಲಿ ಅಧ್ಯಕ್ಷ ಸುರೇಶ್ ರವರು ಮಾತನಾಡಿ ಯಾವುದೇ ಇಲಾಖೆಯಲ್ಲಿ ನ್ಯಾಯಕ್ಕೆ ಸಂಬಂಧಿಸಿದ ದೂರುಗಳ

 ಬಂದರೂ ಸಹ ಸಮಿತಿಯ ಮುಂದೆ ತಂದು‌ ಬಗೆ ಹರಿಸಿಕೊಳ್ಳಲು ಸೂಚಿಸಿದರು.

ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಂ ರಾಮಕೃಷ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಬೆರಳಣಿಕೆ ಸದಸ್ಯರು ಹಾಜರಿದ್ದರು.


ಗ್ರಾಮ ಸ್ಥಳಿಯ ಸಂಸ್ಥೆಗಳ ಚುನಾವಣೆಯು ಹತ್ತಿರವಾಗುತ್ತಿದ್ದಂತೆಯೇ ಇಂತಹ ಸಭೆಗಳು ಪೇಲವ ವಾಗುವುದು ಸಹಜವೇ ಆಗಿದೆ. ನಮ್ಮ ಅಧಿಕಾರದ ಅವಧಿಯು ಇನ್ನೇನು ಮುಗಿದೇ ಹೋಗುತ್ತದೆ, ಅದಕ್ಕಾಗಿ ನಾವು ಯಾಕೆ ದಾಹ ಆರಬೇಕು ಎಂಬ ವಿಚಾರವು ಜನಪ್ರತಿನಿಧಿ ಗಳಲ್ಲಿ ಉಂಟಾಗುತ್ತದೆ.


ಅಧಿಕಾರಿಗಳು ಇನ್ನು ಇವರ ಕಾಲ ಮುಗಿಯುತ್ತಿದೆ, ಇವರ ಮಾತಿಗೆ ಅಥವಾ ಸಭೆಗಳಿಗೆ ಯಾಕೆ ಮಹತ್ವ ಕೊಡಬೇಕು ಎಂಬ ಭಾವನೆಯು ಬಂದು, ಹೀಗೆ ಅಂತಿಮ ಕಾಲದ ಸಭೆಗಳು ಸಾಕಷ್ಟು ನಿರರ್ಥಕವಾಗಿ ಪೇಲವವಾಗಿ ಬಿಡುತ್ತವೆ. ಇದು ಜಗತ್ತಿಗೆ ಗೊತ್ತಿರುವ ಸತ್ಯವಾಗಿದೆ. ಅದೇ ರೀತಿ ಎಲ್ಲಾ ಸ್ಥಾಯಿ ಸಮಿತಿಯ ಇಂದಿನ ಸ್ಥಾಯಿ ಸಮಿತಿಯ ಸಭೆಗಳು ಹತ್ತರಲ್ಲಿ ಹನ್ನೊಂದಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑