Tel: 7676775624 | Mail: info@yellowandred.in

Language: EN KAN

    Follow us :


ಕೂಟಗಲ್ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿ

Posted Date: 31 Jul, 2019

ಕೂಟಗಲ್  ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿ

ಕೂಟಗಲ್  ಕ್ಲಸ್ಟರ್ ಮಟ್ಟದ ಪ್ರತಿಭಾ   ಕಾರಂಜಿ ಮತ್ತು ಕಲೋತ್ಸವ  ಕಾರ್ಯಕ್ರಮವನ್ನು  ರಾಮನಗರ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ  ಸುತ್ತಮುತ್ತ ಇರುವ ೧೪ ಶಾಲೆಗಳಿಂದ ವಿದ್ಯಾರ್ಥಿಗಳು ಮತ್ತು  ಶಿಕ್ಷಕರು ಸೇರಿದಂತೆ  ಸುಮಾರು ೫೦೦ ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.  ಯಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ಮತ್ತು  ರೋಟರಿ ಸಿಲ್ಕ್ ಸಿಟಿ ರಾಮನಗರ  ಸಂಸ್ಥೆಗಳ ಸಹಯೋಗದೊಂದಿಗೆ  ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ  ಸಹಕಾರ ನೀಡಲಾಯಿತು. 


ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಮೂಹ  ಸಂಪನ್ಮೂಲ ವ್ಯಕ್ತಿಯಾಗಿ ಶ್ರೀನಿವಾಸ್ ರವರು , ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರು  ಮತ್ತು (ಯುನಿವರ್ಸಲ್ ಗ್ರೂಪ್  ಆಫ್  ಇನ್ಸ್ಟಿಟ್ಯೂಷನ್  ಅಧ್ಯಕ್ಷರೂ ಆದ)  ರೋ. ಎ. ಜೆ. ಸುರೇಶ್,  ಉಪಾಧ್ಯಕ್ಷರಾದ  ರೋ. ಸೋಮಶೇಖರ್ ರಾವ್ ,  ಕಾರ್ಯದರ್ಶಿಯಾದ ರೋ. ಶಿವರಾಜ್. ಆರ್  ರವರು ಹಾಗೂ ಯಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ನ ಅಧ್ಯಕ್ಷರಾದ ಶ್ರೀ  ಅಮಿತ್ ರಾಜ್ ಶಿವ ರವರು ಮತ್ತು ಅರೇಹಳ್ಳಿಗ್ರಾಮದ ಎಸ್. ಡಿ. ಎಂ .ಸಿ  ಅಧ್ಯಕ್ಷರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. 


ಈ ಕಾರ್ಯಕ್ರಮಕ್ಕೆ  ಯಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ಸದಸ್ಯರಾದ ಶೋಭಾ,  ಅಸ್ಮಾ ಬೇಗಂ, ಶ್ರುತಿ, ತೇಜಸ್ ಗೌಡ  ರವರು ಪಾಲ್ಗೊಂಡಿದ್ದರು ಹಾಗೂ ರೋಟರಿ ಸಿಲ್ಕ್ ಸಿಟಿಯ ನಿರ್ದೇಶಕರಾದ  ರೋ. ಲತಾಗೋಪಾಲ್, ರೋ. ರಘುಕುಮಾರ್,  ಹಾಗೂ ಆಡಳಿತ  ಮಂಡಳಿಯ ಸದಸ್ಯರಾದ ರೋ.ಅನುರಾಧ. ಟಿ.ಜೆ. ಮತ್ತು ರೋ. ಪ್ರಭಾಕರ್ ಎಲ್ , ರೋ. ರವಿಕುಮಾರ್ , ರೋ.  ರಾಘವೇಂದ್ರ,    ರೋ. ಆರ್. ಪಿ. ಪ್ರದೀಪ್, ರೋ. ನರಸಿಂಹರಾಜು, ಸದಸ್ಯರು  ಭಾಗವಹಿಸಿದ್ದರು .  

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑