Tel: 7676775624 | Mail: info@yellowandred.in

Language: EN KAN

    Follow us :


ಎನ್ ಸಿ ಸಿ ಮಕ್ಕಳಿಂದ ಕೆಂಗಲ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ

Posted Date: 01 Aug, 2019

ಎನ್ ಸಿ ಸಿ ಮಕ್ಕಳಿಂದ ಕೆಂಗಲ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ

ಎನ್ ಸಿ ಸಿ ಮಕ್ಕಳು ಮತ್ತು ಅಧಿಕಾರಿಗಳು ಇಂದು ಕೆಂಗಲ್ ದೇವಾಲಯ, ಕೆಂಗಲ್ ಗ್ರಾಮ ಮತ್ತು ಚಂದ್ರಗಿರಿದೊಡ್ಡಿ ಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಕರ್ನಲ್ ಜೆ ಎನ್ ಕುಮಾರ್ ಚಾಲನೆ ನೀಡಿದರು.


ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಚತೆ ಎನ್ನುವುದು ನಮ್ಮ ರಕ್ತಗತವಾಗಿ ಬರಬೇಕು, ಯಾರೋ‌ ಹೇಳಿದರು, ಮಾಡಬೇಕಲ್ಲಾ ಎಂದು ಮಾಡುವುದು ಸ್ವಚ್ಚತಾ ಕಾರ್ಯಕ್ರಮ ಅಲ್ಲಾ.

ಪ್ರತಿ ನಿತ್ಯ ನಮ್ಮ ದೇಹವನ್ನು ಹೇಗೆ ಶುಚಿಗೊಳಿಸಿಕೊಳ್ಳುತ್ತೇವೆಯೋ ಹಾಗೆ ನಮ್ಮ ಮನೆ, ನಮ್ಮ ಬೀದಿ, ನಮ್ಮ ಮನೆಯ ಮುಂದಿನ ಚರಂಡಿ ಗಳನ್ನು ಶುಚಿಗೊಳಿಸಿಕೊಳ್ಳಬೇಕು, ಆಗಲೇ ನಮಗೆ ನಮ್ಮ ಆರೋಗ್ಯ ದ ಜೊತೆಗೆ ದೇಶದ ಆರೋಗ್ಯ ವು ಚನ್ನಾಗಿರುತ್ತದೆ ಎಂದು ಎನ್ ಸಿ ಸಿ ಮಕ್ಕಳಿಗೆ ಕಿವಿಮಾತು ಹೇಳಿದರು.


ಲೆಫ್ಟಿನೆಂಟ್ ಕರ್ನಲ್ ಗೌರವ್ ಬಾಜಪೇಯಿ ಅವರು ಮಾತನಾಡಿ ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ಸಾಮೂಹಿಕವಾಗಿ ಒಡಗೂಡಿ ದೇವಾಲಯಗಳ ಆವರಣ, ಶಾಲಾ ಕಾಲೇಜಿನ ಆವರಣ, ಕೆರೆ, ನದಿಗಳ ಶುದ್ಧೀಕರಣದಲ್ಲಿ ತೊಡಗಿಕೊಳ್ಳಬೇಕು, ಆಗಲೇ ಬದುಕಿನಲ್ಲಿ ಸಾರ್ಥಕ ಭಾವ ಮೂಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.ಸ್ವಚ್ಚತಾ ಕಾರ್ಯಕ್ರಮದಲ್ಲಿ ಮೇಜರ್ ಮಲ್ಲಿಕಾರ್ಜುನ, ಕ್ಯಾಪ್ಟನ್ ರಾಘವೇಂದ್ರ ರಾವ್, ಲೆಪ್ಟನೆಂಟ್ ಸರ್ವೇಶ್, ಇನ್ನಿತರ ಗ್ರೇಡ್ ನ ಅಧಿಕಾರಿಗಳಾದ ರಾಜಮೌಳಿ, ಜಾನ್ ಬಾಸ್ಕೋ, ಡಿ ನಾರಾಯಣ ಮಯ್ಯ, ಅನಿಲ್ ಕುಮಾರ್, ಎನ್ ಬಿ ಭಟ್, ಎಂ ಗೋವಿಂದ್ ಸಿಂಗ್, ಯೋಗೇಶ್ ಗೌಡ ಮತ್ತು ೧೮೦ ಕ್ಕೂ ಹೆಚ್ಚು ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑